loader
ಔಟ್‍ರೀಚ್ ಹೋಮ್‍ಪೇಜಿಗೆ ಹಿಂದಿರುಗಿ

ಕಾವೇರಿ ಕೂಗು. ಇಂದೇ ಕಣಕ್ಕೆ!

"ಕಾವೇರಿಯು ಸ್ವಾಸ್ಥ್ಯ ಸಮೃದ್ಧಿಗಳ ಮೂಲವಷ್ಟೇ ಅಲ್ಲದೆ, ಈ ನಾಡಿನ ಜೀವದಾತೆಯೇ ಆಗಿದ್ದಾಳೆ. 50 ವರ್ಷಗಳಲ್ಲಿ ಈ ಪ್ರದೇಶದ 87% ಹಸಿರು ಹೊದಿಕೆ ಕಣ್ಮರೆಯಾಗಿದೆ, ಮತ್ತು ವರ್ಷಪೂರ್ತಿ ತುಂಬಿ ಹರಿಯುತ್ತಿದ್ದ ಈ ಅರಣ್ಯಪೋಷಿತ ನದಿಯು ಈಗ ವೇಗವಾಗಿ ಕೆಲವು ತಿಂಗಳುಗಳಷ್ಟೇ ಹರಿಯುವ ತೊರೆಯಾಗುತ್ತಿದ್ದಾಳೆ. ಕಾವೇರಿ ಕೂಗುತ್ತಿದ್ದಾಳೆ, ಕೇಳಿಸಿಕೊಳ್ಳುವ ಹೃದಯವು ನಿಮಗಿದೆಯೇ?" - ಸದ್ಗುರು

ಕಾವೇರಿ ಕೂಗು ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ.

farmer

ಒಂದು ಸಮಸ್ಯೆ, ಎರಡು ಮುಖಗಳು

ಬರಿದಾಗುತ್ತಿರುವ ಕಾವೇರಿ

  • ಕಾವೇರಿಯು ಕಳೆದ 70 ವರ್ಷಗಳಲ್ಲಿ 39% ಕ್ಷೀಣಿಸಿದ್ದಾಳೆ.
  • ನದಿಯ ಜಲಾನಯನ ಪ್ರದೇಶದ 87% ಮರಗಳು ಮಾಯವಾಗಿ ಹೋಗಿವೆ.
  • ಕಾವೇರಿ ಜಲಾನಯನ ಪ್ರದೇಶದ ಅರ್ಧದಷ್ಟು ಭಾಗ ತೀವ್ರವಾದ ಅಂತರ್ಜಲದ ಇಳಿಕೆಯಿಂದ ಬಳಲುತ್ತಿದೆ.
  • ಬೇಸಿಗೆಯಲ್ಲಿ ಕಾವೇರಿಯು ಸಮುದ್ರವನ್ನೂ ತಲುಪುತ್ತಿಲ್ಲ.
  • ವರ್ಷದ ಹಲವಾರು ತಿಂಗಳು ಬತ್ತಿಹೋದ, ಮರಳುಗಾಡಿನಂತಿರುವ ನದಿಯ ತಳವಷ್ಟೇ ಲಕ್ಷಾಂತರ ಜನರಿಗೆ ಈಗ ನೋಡಲು ಸಿಗುವುದು.

ರೈತರ ಬಿಕ್ಕಟ್ಟು

ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ರೈತರ ಬವಣೆ ಮತ್ತು ಆತ್ಮಹತ್ಯೆಗಳು ರಾಷ್ಟ್ರೀಯ ಸುದ್ದಿಯ ಮುಖ್ಯಾಂಶಗಳಾಗಿವೆ.

  • ಕಾವೇರಿ ಜಲಾನಯನ ಪ್ರದೇಶದಲ್ಲಿ 15 ವರ್ಷಗಳಲ್ಲಿ 47,190 ರೈತರ ಆತ್ಮಹತ್ಯೆ
  • ತಮಿಳುನಾಡಿನ 83% ರೈತರು ಮತ್ತು ಕರ್ನಾಟಕದ 77% ರೈತರು ಸಾಲದ ಸುಳಿಯಲ್ಲಿದ್ದಾರೆ.
  • 2019 ರಲ್ಲಿ ತಮಿಳುನಾಡಿನ 17 ಜಿಲ್ಲೆಗಳು ಬರಪೀಡಿತ ಸ್ಥಿತಿಯಲ್ಲಿವೆ.
  • ಕರ್ನಾಟಕದಲ್ಲಿ ಕಳೆದ 18 ವರ್ಷಗಳಲ್ಲಿ 15 ವರ್ಷಗಳು ಬರಪೀಡಿತವಾಗಿದ್ದವು.
trees

ಉದ್ದೇಶಿತ ಪರಿಣಾಮ

ಕಾವೇರಿಯನ್ನು ಮತ್ತೆ ಹರಿಯುವಂತೆ ಮಾಡುವ ಸರಳ ಮಾರ್ಗವೆಂದರೆ ಮರಗಳನ್ನು ನೆಡುವುದು. ಅರಣ್ಯಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡಲು ರೈತರಿಗೆ ಕಾವೇರಿ ಕೂಗು ಅಭಿಯಾನವು ಸಹಾಯ ಮಾಡುತ್ತದೆ.

ಹೀಗಿ ಮಾಡುವುದರಿಂದ ಮೂರು ಲಾಭಗಳಿವೆ:

  • ಮಣ್ಣಿನಲ್ಲಿ ಸಾವಯವ ಅಂಶವನ್ನು ಮರು ತುಂಬಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ.
  • ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅಂದಾಜು 40% ಹೆಚ್ಚಿಸುವ ಮೂಲಕ ನದಿ ಮತ್ತು ಅಂತರ್ಜಲ ಮಟ್ಟವನ್ನು ಪುನರೂರ್ಜಿತಗೊಳ್ಳುತ್ತದೆ.
  • 5-7 ವರ್ಷಗಳಲ್ಲಿ ರೈತರ ಆದಾಯವನ್ನು 3-8 ಪಟ್ಟು ಹೆಚ್ಚಾಗುವುದೆಂದು ಸಾಬೀತಾಗಿರುವ ಅರಣ್ಯಕೃಷಿಯ ಮೂಲಕ ರೈತರ ಆದಾಯವನ್ನು ಹೆಚ್ಚುತ್ತದೆ.
dry-cauvery

ಕಾವೇರಿಯನ್ನು ಉಳಿಸಲು ಇಂದೇ ಕಣಕ್ಕೆ!

ಮರವೊಂದಕ್ಕೆ ₹42

1 ಅಥವಾ ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ ’ಕಾವೇರಿ ಉಪಾಸಕ’ರಾಗಿರಿ
10 ಅಥವಾ ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ ’ಕಾವೇರಿ ಶೂರ’ರಾಗಿರಿ
100 ಅಥವಾ ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ ’ಕಾವೇರಿ ಮಿತ್ರ’ರಾಗಿರಿ
1000 ಮರಗಳನ್ನು ನೆಡುವುದರ ಮೂಲಕ ’ಕಾವೇರಿ ವೀರ’ರಾಗಿರಿ
10000 ಮರಗಳನ್ನು ನೆಡುವುದರ ಮೂಲಕ ’ಕಾವೇರಿ ಪರಮ ವೀರ’ರಾಗಿರಿ
100,000 ಮರಗಳನ್ನು ನೆಡುವುದರ ಮೂಲಕ ’ಕಾವೇರಿ ರಕ್ಷಕ’ರಾಗಿರಿ
1 ಮಿಲಿಯನ್ ಮರಗಳನ್ನು ನೆಡುವುದರ ಮೂಲಕ ’ಕಾವೇರಿ ಯೋಧಾ’ ಆಗಿರಿ
10 ಮಿಲಿಯನ್ ಮರಗಳನ್ನು ನೆಡುವುದರ ಮೂಲಕ ’ಕಾವೇರಿ ನಾಯಕ’ರಾಗಿರಿ

ಸರ್ಕಾರಿ ಕ್ರಮ ಮತ್ತು ರೈತರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವುದು 3 -16 ಸೆಪ್ಟೆಂಬರ್

bike-rally

2019ರ ಸೆಪ್ಟೆಂಬರ್ 3 ರಿಂದ 16 ರ ವರೆಗೆ, ಸದ್ಗುರುಗಳು ವೈಯಕ್ತಿಕವಾಗಿ ತಲಕಾವೇರಿಯಿಂದ ತಿರುವರೂರಿಗೆ ಬೈಕ್ ಸವಾರಿ ಮಾಡಿ, ಸಂಪೂರ್ಣ ಕಾವೇರಿ ಜಲಾನಯನ ಪ್ರದೇಶವನ್ನು ಕ್ರಮಿಸಿ, ಸರ್ಕಾರದ ಕ್ರಮ ಮತ್ತು ರೈತರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಿದರು.

ಬೆಂಬಲ ಪ್ರಚಾರಗಳು

Please enter the number of trees you would like to plant
No. of trees :

ನೀವೇನು ಮಾಡಬಹುದು?

ಕೊಡುಗೆ ನೀಡಿ

ಇಂದೇ ಕಣಕ್ಕೆ

ಮರಗಳನ್ನು ನೆಡಲು ರೈತರಿಗೆ ಬೆಂಬಲ ನೀಡಿ. ಕಾವೇರಿಯನ್ನು ಉಳಿಸಲು ನಿಮ್ಮ ಕೊಡುಗೆ ನೀಡಿ.
ಕೊಡುಗೆ ನೀಡಿ
ಅಭಿಯಾನವನ್ನು ಪ್ರಾರಂಭಿಸಿ

ಅಭಿಯಾನವನ್ನು ಪ್ರಾರಂಭಿಸಿ

ನಿಮ್ಮ ಸ್ವಂತ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ನೀವು ಬದಲಾವಣೆಯನ್ನು ತರಲು ಆಶಿಸುತ್ತೀರೆಂದು ಜಗತ್ತಿಗೆ ತಿಳಿಸಿ.
ಪ್ರಾರಂಭಿಸಿ
ಸ್ವಯಂ-ಸೇವಕರು

ಸ್ವಯಂ-ಸೇವಕರು

ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ನಮ್ಮನ್ನು ಬೆಂಬಲಿಸಿ.
ನೋಂದಾಯಿಸಿ

ಸಾಮಾಜಿಕ ಜಾಲತಾಣದಲ್ಲಿ ಬಝ್

    ಅಭಿಯಾನದ ಬಗ್ಗೆ ಸಂದೇಶ ಹರಡಿ

    ಕಾವೇರಿಯನ್ನು ಉಳಿಸಲು ಇಂದೇ ಕಣಕ್ಕೆ

    ನಮ್ಮ ಪಾಲುದಾರರಿಗೆ ಧನ್ಯವಾದಗಳು!

    ಸಂಪರ್ಕದಲ್ಲಿರಿ
    ಕಾವೇರಿ ಕೂಗು ಅಭಿಯಾನದ ಇತ್ತೀಚಿನ ಮಾಹಿತಿಯನ್ನು ನೇರವಾಗಿ ನಿಮ್ಮ ಇನ್‌ಬಾಕ್ಸ್‌-ನಲ್ಲಿ ಪಡೆಯಿರಿ.