loader
ಔಟ್‍ರೀಚ್ ಹೋಮ್‍ಪೇಜಿಗೆ ಹಿಂದಿರುಗಿ

Isha Outreach has appointed an eminent Rally for Rivers board (constituted on November 8, 2017) to oversee the Cauvery Calling project. The board comprises Mr. Ravi Singh, CEO and Secretary-General, World Wide Fund for Nature-India; Justice Arijit Pasayat, Retired Judge, Supreme Court of India; Ms. Kiran Mazumdar-Shaw, Chairperson and Managing Director, Biocon Ltd; Mr. Shashi Shekhar, former Secretary, Water Resources, Government of India; Dr AS Kiran Kumar, former Chairperson, Indian Space Research Organisation; Mr. Pravesh Sharma, former Secretary and MD of Small Farmers’ Agri-Business Consortium, Government of India; Mr. B Muthuraman, former Chairperson, Tata Steel, Mr. Chandrajit Banerjee, Director General, Confederation of Indian Industries.

Mr Chandrajit Banerjee

Mr.Chandrajit Banerjee

Director General, Confederation of Indian Industry (CII)

Prior to his appointment as Director General, Mr Banerjee held several senior positions in CII in key areas including sectoral verticals of Manufacturing, Services, Agriculture and Life Sciences as well as the SME sector. He has also led CII’s policy work relating to macroeconomic policy, financial services and corporate governance.

kiran-kumar

ಡಾ.ಎ.ಎಸ್. ಕಿರಣ್ ಕುಮಾರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷರು

ಮಂಗಳಯಾನವನ್ನು ಮಂಗಳದ ಕಡೆಗೆ ತಿರುಗಿಸಲು ಮತ್ತು ಅದನ್ನು ಕಕ್ಷೆಗೆ ಸೇರಿಸಲು ಯಶಸ್ವಿ ಕಾರ್ಯವಿಧಾನವನ್ನು ರೂಪಿಸುವಲ್ಲಿ ಎ.ಎಸ್. ಕಿರಣ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಶ್ರೀ. ಆಲೂರು ಸೀಳಿನ್‌ ಕಿರಣ್‌ ಕುಮಾರ್ ಅವರು ಇಸ್ರೋದ ಅತ್ಯಂತ ನಿಪುಣ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದು, ಉಪಗ್ರಹ ಪೇಲೋಡ್ ಮತ್ತು ಅಪ್ಲಿಕೇಶನ್‌ಗಳ ಕ್ಷೇತ್ರದಲ್ಲಿ ನಾಲ್ಕು ದಶಕಗಳ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ

Mr.B Muthuraman

ಶ್ರೀ. ಬಿ ಮುತ್ತುರಾಮನ್

ಮಾಜಿ ಉಪಾಧ್ಯಕ್ಷ, ಟಾಟಾ ಸ್ಟೀಲ್

ಬಾಲಸುಬ್ರಮಣ್ಯನ್ ಮುತ್ತುರಾಮನ್ ಭಾರತದ ಅತಿದೊಡ್ಡ ಉಕ್ಕು ತಯಾರಕರಾದ ಟಾಟಾ ಸ್ಟೀಲ್‌ನ ಉಪಾಧ್ಯಕ್ಷರು ಮತ್ತು ಟಾಟಾ ಇಂಟರ್ನ್ಯಾಷನಲ್-ನ ಅಧ್ಯಕ್ಷರಾಗಿದ್ದರು. ಅವರಿಗೆ 2012 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು 2011-12ರಲ್ಲಿ ಸಿಐಐ ಅಧ್ಯಕ್ಷರಾಗಿದ್ದರು ಮತ್ತು ಮತ್ತು 1989 ರಿಂದ ಎಎಸ್ಪಿಎ (ಅಲಾಯ್ ಸ್ಟೀಲ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್) ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ ಮತ್ತು 1993-95ರವರೆಗೆ ಅದರ ಅಧ್ಯಕ್ಷರಾಗಿದ್ದರು.

Mr. Pravesh Sharma

ಶ್ರೀ. ಪರ್ವೇಶ್ ಶರ್ಮ

ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಣ್ಣ ರೈತರ ಕೃಷಿ ವಾಣಿಜ್ಯ ಒಕ್ಕೂಟದ ಮಾಜಿ ವ್ಯವಸ್ಥಾಪಕ ನಿರ್ದೇಶಕರು

ಕೃಷಿ ಕ್ಷೇತ್ರದಲ್ಲಿ ಆಳವಾದ ಅನುಭವ ಹೊಂದಿರುವ ಮಾಜಿ ಐಎಎಸ್ ಅಧಿಕಾರಿ ಪ್ರವೀಶ್ ಶರ್ಮಾ ಅವರು ಕೃಷಿ ಸಮುದಾಯದೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡಲು 34 ವರ್ಷಗಳ ಸೇವೆಯ ನಂತರ ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆದುಕೊಂಡರು.

Mr.Shashi Shekhar

ಶ್ರೀ. ಶಶಿ ಶೇಖರ್

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯದ ಮಾಜಿ ಕಾರ್ಯದರ್ಶಿಗಳು

ಶ್ರೀ. ಶಶಿ ಶೇಖರ್ ಅವರು ತಮ್ಮ ಜಲಸಂಪನ್ಮೂಲ ಸಚಿವಾಲಯದಲ್ಲಿ ಅವಧಿಯಲ್ಲಿ ನೀರಿನ ಕ್ಷೇತ್ರದಲ್ಲಿ ಬಹುದೊಡ್ಡ ಸುಧಾರಣೆಗಳನ್ನು ಆರಂಭಿಸಿದ್ದಾರೆ. ಬೆಳೆ ವಿಧಾನವನ್ನು ಬದಲಾಯಿಸುವ ಮೂಲಕ ನೀರಿನ ಹಂಚಿಕೆ, ನೀರಿನ ಲೇಖಾವಿಧಾನ ಮತ್ತುನೀರಿನ ಸಮರ್ಥ ಬಳಕೆಗೆ ಅಧಿಕೃತ ನೀತಿಯಲ್ಲಿ ಒತ್ತು ನೀಡುವಲ್ಲಿ ಅವರು ಜವಾಬ್ದಾರರಾಗಿದ್ದರು.

Mr. Ravi Singh

ಶ್ರೀ. ರವಿ ಸಿಂಗ್

ವಿಶ್ವ ವನ್ಯಜೀವಿ ನಿಧಿ – ಭಾರತ: ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)

ದೇಶದ ಅತಿದೊಡ್ಡ ಸಂರಕ್ಷಣಾ ಸಂಸ್ಥೆಯಾದ ವಿಶ್ವ ವನ್ಯಜೀವಿ ನಿಧಿ - ಭಾರತ (ಡಬ್ಲ್ಯುಡಬ್ಲ್ಯುಎಫ್), ಇದರ ಮುಖ್ಯಸ್ಥರಾಗಿ, ರವಿ ಸಿಂಗ್ ಅವರು ಪ್ರಕೃತಿಯ ಸಂರಕ್ಷಣೆಯ ಬಗ್ಗೆ ದೃಢವಾದ ಬಾಧ್ಯತೆಯನ್ನು ಹೊಂದಿದ್ದಾರೆ. ಅವರ ಸಂರಕ್ಷಣಾ ಕಾರ್ಯವು ಪ್ರಕೃತಿಯಲ್ಲಿ ಮಾನವರ ಪರಿಣಾಮವನ್ನು ಕಡಿಮೆ ಮಾಡುವತ್ತ ಕೇಂದ್ರೀಕೃತವಾಗಿದ್ದು ರಾಷ್ಟ್ರೀಯ ಮಟ್ಟದಲ್ಲಿ ಜೀವವೈವಿಧ್ಯತೆಯನ್ನು ಒಳಗೊಂಡಿದೆ.

Kiran Shaw

ಶ್ರೀಮತಿ ಕಿರಣ್ ಮಜುಂದಾರ್-ಶಾ

ಬಯೋಕಾನ್ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ

ಶ್ರೀಮತಿ ಕಿರಣ್ ಮಜುಂದಾರ್-ಶಾ ಅವರು ಭಾರತದ ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಪ್ರವರ್ತಕರು ಮತ್ತು ದೇಶದ ಪ್ರಮುಖ ಜೈವಿಕ ತಂತ್ರಜ್ಞಾನ ಉದ್ಯಮವಾದ ಬಯೋಕಾನಿನ ಸಂಸ್ಥಾಪಕರಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಮತ್ತು ಪದ್ಮಭೂಷಣ್ ಅವರಿಗೆ ನೀಡಿ ಪುರಸ್ಕರಿಸಲಾಗಿದೆ.

Justice Arijit Pasayat

ನ್ಯಾಯಮೂರ್ತಿ ಡಾ. ಅರಿಜಿತ್ ಪಸಾಯತ್

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ಪರಿಸರ ಸಂರಕ್ಷಣೆಯನ್ನು ಬಲವಾಗಿ ಪ್ರತಿಪಾದಿಸುವ ನ್ಯಾಯಮೂರ್ತಿ ಪಸಾಯತ್ ಅವರು ಪರಿಸರವನ್ನು ಸಂರಕ್ಷಿಸುವುದು ಸಾಂವಿಧಾನಿಕ ಆದೇಶವೆಂದು ಪರಿಗಣಿಸಿದ್ದಾರೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧದ ಬಗ್ಗೆ ಸಂವೇದನಾಶೀಲರಾಗಿರುವ ಇವರು, ಪ್ರಕೃತಿಯೊಂದಿಗೆ ತೊಡಗಿಸಿಕೊಳ್ಳುವಿಕೆಯ ಅಗತ್ಯವಿರುವ ವಾಣಿಜ್ಯ ಚಟುವಟಿಕೆಗಳು ವೈಜ್ಞಾನಿಕ ಮತ್ತು ಸುಸ್ಥಿರವಾಗಿರಬೇಕು ಎಂಬಂತಹ ಅಭಿಪ್ರಾಯವನ್ನು ಹೊಂದಿರುವಂತಹವರಾಗಿದ್ದಾರೆ.